Shola Forest, one of the country's sensitive areas, is suffered by a large wild fire in the Baba Budangiri range of Chikmagalur. Devirarmanna Hill, Chikmagalur is surrounded by kennel of fire in the gutter. Watch video.
ಚಿಕ್ಕಮಗಳೂರಿನ ಬಾಬುಡನ್‌ಗಿರಿ ಶ್ರೇಣಿಯಲ್ಲಿ ಅಪಾರ ಪ್ರಮಾಣದ ಬೆಂಕಿ ಹೊತ್ತಿಕೊಂಡು ದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಶೋಲಾ ಫಾರೆಸ್ಟ್ ಬೆಂಕಿಗಾಹುತಿಯಾಗಿದೆ. ಚಿಕ್ಕಮಗಳೂರಿನ ದೇವಿರಮ್ಮನ ಬೆಟ್ಟ, ಗಾಳಿಕೆರೆ ಭಾಗದಲ್ಲಿ ಬೆಂಕಿಯ ಕೆನ್ನಾಲಿಗೆ ಆವರಿಸಿಕೊಂಡಿದೆ. ಗಿರಿ ಶ್ರೇಣಿಯ ಮೂರು ಕಡೆಗಳಲ್ಲಿ ಬೆಂಕಿ ವ್ಯಾಪಿಸಿದ್ದು, ಈ ಪ್ರದೇಶದ ಹುಲ್ಲುಗಾವಲು, ಔಷಧಿಯ ಗಿಡಗಳು ಸುಟ್ಟು ಕರಕಲಾಗಿದೆ. ಅಪರೂಪದ ಹಾವು, ಅಳಿಲು ಮೊದಲಾದ ಜೀವಸಂಕುಲಗಳು ಸಾವನ್ನಪ್ಪಿವೆ. ಸುಮಾರು 75 ಎಕರೆಯಲ್ಲಿನ ಸಸ್ಯಸಂಕುಲ ಸಂಪೂರ್ಣ ನಾಶವಾಗಿದೆ.